-
Reimagining India in the Geopolitics of the 21st Century – India’s Strategic Vision in a Changing World
Book Name: Reimagining India
Edited By: Dr. Nanda Kirshor, Prashanth Vaidyaraj
Publisher: Vishwa Samvada Kendra Karnataka
Reimagining India in the Geopolitics of the 21st Century is a thought-provoking and analytical work that explores India’s strategic positioning in an era marked by global uncertainty, shifting power blocs, and emerging geopolitical challenges.₹600.00 -
ಕಾರ್ಯಕರ್ತ | ದತ್ತೋಪಂತ ಠೇಂಗಡಿ | Karyakarta Kannada Book by Dattopant Thengadi | RSS Worker, Ideology & Methodology
ಪುಸ್ತಕದ ಹೆಸರು: ಕಾರ್ಯಕರ್ತ
ಲೇಖಕರು: ದತ್ತೋಪಂತ ಠೇಂಗಡಿ
ಪ್ರಕಾಶಕರು: ಸಾಹಿತ್ಯ ಸಂಗಮ
ಈ ಪುಸ್ತಕದಲ್ಲಿ ಸಂಕಲಿತವಾಗಿರುವ ವಿಚಾರದ ಕೇಂದ್ರಬಿಂದುವಾಗಿರುವವನು ʼರಾಷ್ಟ್ರೀಯ ಸ್ವಯಂಸೇವಕ ಸಂಘʼದ ಕಾರ್ಯಕರ್ತ. ಆದರೆ ಅವನು ಅರಳುವುದು ನಮ್ಮ ಕೆಲಸದ ಅಧಿಷ್ಠಾನದಿಂದ ಪ್ರೇರಣೆ ಪಡೆದು ಮತ್ತು ಕಾರ್ಯಪದ್ಧತಿಯ ಬಿಗಿಯಾದ ಅನುಶಾಸನದಿಂದ ತೀಡಲ್ಪಡುವ ಮೂಲಕ. ಮುಂದೆ ಅದೇ ಕಾರ್ಯಪದ್ಧತಿಯಲ್ಲಿ ಶಕ್ತಿ ತುಂಬಿ ಗುರಿಪ್ರಾಪ್ತಿಯ ಉದ್ದೇಶಸಹಿತ ಅವನು ಮುನ್ನಡೆಯುತ್ತಾನೆ. ಇದನ್ನು ಲಕ್ಷ್ಯದಲ್ಲಿರಿಸಿ ʼಅಧಿಷ್ಠಾನʼ ಮತ್ತು ʼಕಾರ್ಯಪದ್ಧತಿʼ ಎಂಬ ಎರಡು ವಿಷಯಸೂತ್ರಗಳ ಜತೆ ಕಾರ್ಯಕರ್ತ ಎಂಬ ವಿಷಯವನ್ನೂ ಇಲ್ಲಿ ಸಮಗ್ರವಾಗಿ ಸಂಕಲಿತಗೊಳಿಸಲಾಗಿದೆ.₹120.00 -
ಉತ್ತುಂಗ | ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ | Uttunga | The Inspiring Life Portrait of K. Suryanarayana Rao
ಪುಸ್ತಕದ ಹೆಸರು: ಉತ್ತುಂಗ – ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ
ಲೇಖಕರು: ಕೃಷ್ಣಪ್ರಸಾದ ಬದಿ
ಪ್ರಕಾಶಕರು: ಸಾಹಿತ್ಯ ಸಂಗಮ
ಸಂಘವು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ ಓರ್ವ ತರುಣ ಅದರಲ್ಲಿ ಪ್ರವೇಶಿಸಿದ ಹಾಗೂ ಮುಂದೆ ಅದನ್ನೇ ತನ್ನ ಆರಾಧ್ಯವಾಗಿರಿಸಿ ಸಾಧನೆಯನ್ನೂ ಸ್ವೀಕರಿಸಿದ. ಕ್ರಮೇಣ ಈ ಸಾಧನೆಯನ್ನು ತನ್ನ ಜೀವನಪಥವಾಗಿ ಮಾಡಿಕೊಂಡು ಅದರಲ್ಲೇ ಮುಂದುವರಿಯುತ್ತ, ಅದೇ ಕರ್ತವ್ಯಪಥದಲ್ಲಿ ಬೆಳಗಿದ ಇನ್ನೂ ಹಲವಾರು ಸಾಧಕರ ಮಾಲಿಕೆಯಲ್ಲಿ ಓರ್ವ ಪ್ರಮುಖನ ಸ್ಥಾನಕ್ಕೆ ತಲುಪಿದ. ಇಂತಹ ಸಾಧನೆ ಗೈದ ವ್ಯಕ್ತಿಯೇ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರು.₹200.00 -
ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು | Nirmalaya – The Ideal RSS Pracharak: Life and Legacy of N. Krishnappa
ಪುಸ್ತಕದ ಹೆಸರು: ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು
ಲೇಖಕರು: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ
ಕೃಷ್ಣಪ್ಪನವರ ಜೀವನಗಾಥೆ ಬರೆಯುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಅವರು ತಮ್ಮ ಬಗ್ಗೆ ಹೇಳಿಕೊಂಡಿರುವುದಾಗಲೀ ಬರೆದುಕೊಂಡಿರುವುದಾಗಲೀ ಹೆಚ್ಚೇನೂ ಸಿಗುವುದಿಲ್ಲವಾದ್ದರಿಂದ ಅದು ಕಷ್ಟ. ಆದರೆ ಅಕ್ಷರಶಃ ಸಾವಿರಾರು ಜನರೊಂದಿಗೆ ವ್ಯಕ್ತಿಗತವಾಗಿ ಪರಿಚಯ ಮಾತ್ರವಲ್ಲ, ಅವರ ಬದುಕುಗಳಲ್ಲೂ ವಿಶಿಷ್ಟ ಪಾತ್ರ ವಹಿಸಿದ್ದರಿಂದಾಗಿ ಆ ಎಲ್ಲ ಜನರೇ ಜೀವನಕಥೆಗೆ ಬೇಕಾದ ಸಾಮಗ್ರಿ ಒದಗಿಸುತ್ತಾರಾದ್ದರಿಂದ ಅದು ಸುಲಭವೂ ಹೌದು.₹150.00 -
ಸನಾತನ: ನಿತ್ಯ ನೂತನ | ದು. ಗು. ಲಕ್ಷ್ಮಣ್| Sanatana: Nitya Nootana – Insights into Sanatana Dharma by Du.Gu. Lakshmana (Kannada Book)
ಪುಸ್ತಕ: ಸನಾತನ ನಿತ್ಯ ನೂತನ
ಲೇಖಕರು: ದು.ಗು.ಲಕ್ಷ್ಮಣ
ಪ್ರಕಾಶಕರು: ಸಮೃದ್ಧ ಸಾಹಿತ್ಯ
ದು.ಗು. ಲಕ್ಷ್ಮಣ್ ಅವರು ಹೊಸದಿಗಂತ, ಅಜೇಯ, ನವಪರ್ವ, ಸುದರ್ಶನ, ಕಲಾದರ್ಶನ ಮೊದಲಾದ ಪತ್ರಿಕೆಗಳಿಗೆ ಹಾಗೂ ಇನ್ನಿತರ ಶಾಲಾ-ಕಾಲೇಜುಗಳ ವಾರ್ಷಿಕ ಸಂಚಿಕೆಗಳಿಗೆ ಬರೆದ ಲೇಖನಗಳ ಸಂಗ್ರಹವನ್ನು ಒಗ್ಗೂಡಿಸಿ ಸನಾತನ ನಿತ್ಯನೂತನ ಎಂಬ ಕೃತಿಯನ್ನು ಹೊರ ತರಲಾಗಿದೆ.₹160.00 -
My First Book of Ayurveda – A Children’s Guide to Indian Traditional Health & Wellness
Book Name: My First Book of Ayurveda
Editors: Dr. Vibhuti S Rao and Dr Roopashree S
Reviewed by experienced academic and clinical Ayurveda practitioners, this book is ideal for schools, parents, Ayurveda clinics, and health educators aiming to build foundational awareness of India’s traditional medical system. It encourages children to adopt healthy lifestyle habits, understand the value of disease prevention, and appreciate Ayurveda as an integral part of Indian living.₹300.00 -
ಗಾನಮಾಲಾ | Ganamala Songs Collections of RSS
ಪುಸ್ತಕದ ಹೆಸರು: ಗಾನಮಾಲಾ
ಪ್ರಕಾಶಕರು: ಸಾಹಿತ್ಯ ಸಂಗಮ
ಅರ್ಚನಾ ಪುಸ್ತಕ ಸಂಪುಟದ 12 ಆವೃತ್ತಿಗಳಲ್ಲಿ ಪ್ರಕಟವಾದ ಎಲ್ಲಾ ಹಾಡುಗಳನ್ನು ಸೇರಿಸಿ ʼಗಾನಮಾಲಾʼ ಎಂಬ ಹೆಸರಿನ ಒಂದು ಬೃಹತ್ ಸಂಪುಟವನ್ನು ಹೊರತರಲಾಗಿದೆ. ಈ ಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ, ಉತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಬಳಸುವ ಹಾಡುಗಳನ್ನಷ್ಟೆ ಉಳಿಸಿಕೊಳ್ಳಲಾಗಿದೆ. ಇದರಲ್ಲಿ 272 ಹಾಡುಗಳ ಸಂಗ್ರಹವಿದೆ.
₹100.00 -
ಹಿಂದುತ್ವ: ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ | Hindutva: Relevance and Reality in the Modern World (Kannada Book)
ಪುಸ್ತಕದ ಹೆಸರು: ಹಿಂದುತ್ವ
ಲೇಖಕರು: ಡಾ. ಮೋಹನ್ ಭಾಗವತ್, ಶ್ರೀ ಸುರೇಶ್ ಸೋನಿ, ಶ್ರೀ ಅರುಣ್ ಕುಮಾರ್
ಪ್ರಕಾಶಕರು: ಸಾಹಿತ್ಯ ಸಂಗಮ
ಇಂದು ಜಗತ್ತನ್ನು ಸಾಮಾಜಿಕ, ಪಾಂಥಿಕ, ಆರ್ಥಿಕ, ಪಾರಿಸಾರಿಕ, ಮಾನಸಿಕ ಸಮಸ್ಯೆಗಳ ರೂಪದಲ್ಲಿ ಕಾಡುತ್ತಿರುವ ಅನೇಕ ಅಸ್ತಿತ್ವದ ಬಿಕ್ಕಟ್ಟುಗಳಿಗೆ (Existential Problems) ಪರಿಹಾರವನ್ನು ನೀಡಲು ಸಾಧ್ಯವಿರುವುದು ಹಿಂದುತ್ವಕ್ಕೆ ಮಾತ್ರ. ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ಈ ಸಾಮರ್ಥ್ಯದ ಬಗ್ಗೆ ಭಯಭೀತರಾಗಿರುವ ಅನೇಕ ಸ್ವಾರ್ಥಿ, ಸಂಕುಚಿತ ಮನಸ್ಸಿನ ಜನರು ಇದನ್ನು ವಿರೋಧಿಸುವುದಷ್ಟೇ ಅಲ್ಲದೆ, ಇದನ್ನು ಕಳಂಕಿತಗೊಳಿಸಲು ಅಪಪ್ರಚಾರದಲ್ಲೂ ತೊಡಗಿದ್ದಾರೆ. ‘ಮೂಲಭೂತವಾದಿ’, ‘ಪುರಾಣಪಂಥಿ’, ‘ಅಂಧವಿಶ್ವಾಸಿ’, ‘ಪಿತೃಪ್ರಧಾನ’, ‘ಪ್ರತಿಗಾಮಿ’, ‘ಭೇದಭಾವ’ವುಳ್ಳದ್ದು, ‘ಜಾತಿವಾದಿ’ ಮುಂತಾದ ಭ್ರಾಮಕ ವಿಶೇಷಣಗಳನ್ನು ಉಪಯೋಗಿಸಿ ಅಪಪ್ರಚಾರ ಮಾಡುವ ಪ್ರಯತ್ನವನ್ನು ಈ ವಿಘಟನಕಾರಿ ಶಕ್ತಿಗಳು ಸತತವಾಗಿ ಮಾಡುತ್ತಿವೆ.₹50.00 -
ಸ್ವಾಮೀಜಿ ಮಾಡಿದ ಯಾಗಗಳು | Swameeji Madida Yagagalu By Girish V S (Kannada Book)
ಪುಸ್ತಕದ ಹೆಸರು: ಸ್ವಾಮೀಜಿ ಮಾಡಿದ ಯಾಗಗಳು
ಲೇಖಕರು: ಗಿರೀಶ್ ವಿ. ಎಸ್.
ಪ್ರಕಾಶನ: ಋಷಿ ಸ್ವರ ಪಬ್ಲಿಕೇಷನ್ಸ್
ಯಾಗವೆಂಬದು ಭಾರತೀಯ ಸಂಸ್ಕೃತಿಯಲ್ಲಿ ಹೇಗೆ ಹಾಸು ಹೊಕ್ಕಾಗಿದೆ. ನಿಜವಾಗಿ ಯಾಗಗಳನ್ನು ಮಾಡಲು ಯಾವ ರೀತಿಯ ಅಳತೆಗಳಿರಬೇಕು, ಎಷ್ಟು ಅಧ್ಯಯನ ಸಂಯೋಜನೆಯನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಪುಸ್ತಕವು ನಿಮಗೆ ಒಂದಷ್ಟು ವಿಷಯವನ್ನು ತಿಳಿಸುವ ದಾರಿದೀಪವಾಗಬಹುದು.₹500.00 -
ನೆನಪೇ ಸಂಗೀತ ಕನ್ನಡ ಪುಸ್ತಕ | Nenape Sangeetha – Kannada Book | Life Story of Singer Vidyabhushana
ಪುಸ್ತಕದ ಹೆಸರು: ನೆನಪೇ ಸಂಗೀತ
ಲೇಖಕರು: ವಿದ್ಯಾಭೂಷಣ
ಪ್ರಕಾಶಕರು: ಉದ್ಗೀಥ ಪ್ರಕಾಶನ
ಕನ್ನಡ ನಾಡಿನ ಖ್ಯಾತ ಗಾಯಕ ವಿದ್ಯಾಭೂಷಣರ ಜೀವನ ಕಥನ ಹೊಂದಿರುವ ಪುಸ್ತಕವಿದು. ವಿದ್ಯಾಭೂಷಣರ ಬಾಲ್ಯಕಾಲ, ಸನ್ಯಾಸತ್ವ ಸ್ವೀಕರಿಸುವುದಕ್ಕೂ ಮೊದಲಿನ ದಿನಗಳು, ಒಲ್ಲದ ಸನ್ಯಾಸ, ವಿಷಮ ಪರಿಸ್ಥಿತಿಯ ದಿನಗಳು, ಆಶ್ರಮ ತ್ಯಾಗದ ಹಿಂದಿನ ತಳಮಳಗಳು ಹೀಗೆ ಅವರ ಬದುಕಿನ ವಿವಿಧ ಮಜಲುಗಳನ್ನು ತೆರೆದಿಡುವ ಪುಸ್ತಕ ನೆನಪೇ ಸಂಗೀತ.
₹220.00 -
ಪರಿಸರ ಪರ | Parisara Para Kannada Book By Narayana Shevire
ಪುಸ್ತಕದ ಹೆಸರು: ಪರಿಸರ ಪರ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಪರಿಸರ, ಪರಿಸರ ಸಂರಕ್ಷಣೆ, ಪರಿಸರ ಮಾಲಿನ್ಯ, ವೃಕ್ಷಾರೋಪಣ, ಪರಿಸರ ದಿನ ಆಚರಣೆ – ಹೀಗೆ ದಿನವೂ ಪರಿಸರ-ಸಂಬಂಧಿತ ಒಂದಲ್ಲ ಒಂದು ವಿಷಯ-ಸುದ್ದಿ ಕಿವಿಗೆ ಬೀಳುತ್ತಿರುವ ವರ್ತಮಾನದಲ್ಲಿ ನಮಗೆ ಅನುಸರಣೀಯವಾದ ದೃಷ್ಟಿ-ಧೋರಣೆ ಯಾವುದು?- ಎಂಬುದನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಅಂಥದ್ದೊಂದು ಚಿಂತನೆಗೆ ತೊಡಗಲು ಒದಗಿಬರಬಹುದಾದ, ಪರಿಸರ ಸಂಬಂಧಿತ, ಲೇಖನಗಳ ಸಂಕಲನ ‘ಪರಿಸರ ಪರ’.₹72.00₹80.00 -
ಪಾಠಶಾಲೆ | Patashale Kannada Book By Narayana Shevire
ಪುಸ್ತಕದ ಹೆಸರು: ಪಾಠಶಾಲೆ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಹಲವು ಮುಖಗಳಲ್ಲಿ ‘ಶಿಕ್ಷಣ’ವನ್ನು ಕುರಿತ ಚರ್ಚೆ ಸದಾ ಜೀವಂತ. ಅದು ‘ಮುಗಿಯಿತು’ ಎಂದಾಗುವುದಿಲ್ಲ; ದಿನದಿನವೂ ಹೊಸ ಹೊಸ ಪ್ರಯೋಗಗಳು, ಹೊಸ ಹೊಸ ಹೊಳಹುಗಳು, ಹೊಸ ಹೊಸ ಅನುಭವಗಳು ಕಾಣಸಿಗುತ್ತವೆ. ಎಲ್ಲ ಸ್ತರ, ವರ್ಗ, ಭಾಷೆ, ಮತಗಳವರೂ ಇದರಲ್ಲಿ ಆಸಕ್ತರು; ಭಾಗಿಗಳು. ಒಬ್ಬರ ಅನುಭವ ಇನ್ನೊಬ್ಬರಿಗೆ ಪಾಠ; ಒಬ್ಬರ ಪ್ರಯೋಗ ಇನ್ನೊಬ್ಬರಿಗೆ ಮಾರ್ಗದರ್ಶಿ. ಈ ಹಿನ್ನೆಲೆಯಲ್ಲಿ, ಈಗಾಗಲೇ ನಡೆಯುತ್ತಿರುವ ಚರ್ಚೆಗಳಿಗೆ ಒಂದಷ್ಟು ಮೌಲಿಕ ಸರಕನ್ನು ಒದಗಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.₹72.00₹80.00ಪಾಠಶಾಲೆ | Patashale Kannada Book By Narayana Shevire
₹72.00₹80.00 -
Lalitavistara (Gautama Buddhana Jeevanagathe) | ಲಲಿತ ವಿಸ್ತರ (ಗೌತಮಬುದ್ಧನ ಜೀವನಗಾಥೆ)
ಲಲಿತ ವಿಸ್ತರ (ಗೌತಮಬುದ್ಧನ ಜೀವನಗಾಥೆ)
ಮೂಲ ಸಂಸ್ಕೃತ ಕೃತಿ
ತೆಲುಗಿಗೆ: ತಿರುಮಲ ರಾಮಚಂದ್ರ, ಬುಲುಸು ವೆಂಕಟರಮಣಯ್ಯ
ಕನ್ನಡಕ್ಕೆ: ಡಾ. ಆರ್. ಶೇಷಶಾಸ್ತ್ರಿ
ಪ್ರಕಟಣೆ: ದಿವ್ಯಾ ಪ್ರಕಾಶನಈ ಆವೃತ್ತಿಯಲ್ಲಿ ಸಂಸ್ಕೃತ ಮೂಲಗ್ರಂಥದ ಆಳ ಮತ್ತು ಗೌರವವನ್ನು ಕಾಪಾಡಿಕೊಂಡು, ತೆಲುಗು ಭಾಷಾಂತರದ ಆಧಾರದಲ್ಲಿ ಡಾ. ಆರ್. ಶೇಷಶಾಸ್ತ್ರಿ ಅವರು ಕನ್ನಡಕ್ಕೆ ಸುಂದರವಾಗಿ ಅನುವಾದಿಸಿದ್ದಾರೆ.
₹1,200.00 -
ಪುನರುತ್ಥಾನ: ಆಚಾರ್ಯ ಶಂಕರರ ಜೀವನಾಧಾರಿತ ಕಾದಂಬರಿ | Punarutthana: A Novel Based on the Life of Acharya Shankaracharya (Kannada Book)
ಪುಸ್ತಕದ ಹೆಸರು: ಪುನರುತ್ಥಾನ
ಮರಾಠಿ ಮೂಲ: ಡಾ. ಸಚ್ಚಿದಾನಂದ ಶೆವಡೆ,
ಕನ್ನಡ ಅನುವಾದ: ಡಾ. ಸುಮಾ ದ್ವಾರಕಾನಾಥ್
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯಕೇವಲ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ಅನೂಹ್ಯವೆನಿಸುವಂಥ ಮಹತ್ಕಾರ್ಯವನ್ನು ಸಾಧಿಸಿದ ಆಚಾರ್ಯ ಶಂಕರರ ಜೀವನವನ್ನು ಆಧರಿಸಿದ ಕಾದಂಬರಿ – ‘ಪುನರುತ್ಥಾನ’. ಮರಾಠಿಯಲ್ಲಿ ಪ್ರಸಿದ್ಧ ಲೇಖಕರೂ ಪ್ರವಚನಕಾರರೂ ಆಗಿರುವ ಡಾ॥ ಸಚ್ಚಿದಾನಂದ ಶೆವಡೆಯವರ ಈ ಕೃತಿ ಈಗಾಗಲೇ ಹಿಂದಿಗೂ ಅನುವಾದಗೊಂಡಿದೆ. ಇದನ್ನು ಡಾ. ಸುಮಾ ದ್ವಾರಕಾನಾಥ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಚಾರ್ಯ ಶಂಕರರದ್ದು ನಮ್ಮ ಕಲ್ಪನೆಗೂ ಎಟುಕದ ಜೀವನ-ಸಾಧನೆ. ಅದನ್ನು ಸ್ಥೂಲವಾಗಿ ಪರಿಚಯಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.
₹270.00₹300.00
Shop By Category















