• ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ) – ಎಸ್‌. ಆರ್‌. ರಾಮಸ್ವಾಮಿ

    ಪುಸ್ತಕದ ಹೆಸರು: ಸೂಕ್ತಿ-ಸ್ತಬಕ
    ಲೇಖಕರು: ಎಸ್‌.ಆರ್‌. ರಾಮಸ್ವಾಮಿ
    ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ‘

    ‘ಉತ್ಥಾನ’ ಮಾಸಪತ್ರಿಕೆಯಲ್ಲಿ ‘ದೀಪ್ತಿ’ ಎಂಬ ಸ್ತಂಭಶೀರ್ಷಿಕೆಯಡಿಯಲ್ಲಿ ೨೦೦೩-೨೦೦೮ರ ಅವಧಿಯಲ್ಲಿ ನಿಯಮಿತವಾಗಿ ಪ್ರಕಟವಾಗಿದ್ದ ಲಘುಟಿಪ್ಪಣಿಗಳಿಂದೊಡಗೂಡಿನ 70 ಸುಭಾಷಿತಗಳ ಸಂಕಲನ 2010ರಲ್ಲಿ ‘ಸೂಕ್ತಿ-ಸಪ್ತತಿ’ ಎಂಬ ಹೆಸರಿನಲ್ಲಿ; ಮಾರ್ಚ್ 2009ರಿಂದ ಮೇ 2015ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 75 ಬರಹಗಳು ‘ಸೂಕ್ತಿ-ಸಂಚಯ’ ಎಂಬ ಹೆಸರಿನಲ್ಲಿ 2015ರಲ್ಲಿ ಪ್ರಕಟವಾಗಿವೆ. ಜೂನ್ 2015ರಿಂದ ಮೇ 2021ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 70 ಬರಹಗಳು ‘ಸೂಕ್ತಿ-ಸುಗಂಧ’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅದೇ ಅಂಕಣದಲ್ಲಿ ಜೂನ್ 2021ರಿಂದ ನವೆಂಬರ್ 2025ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 54 ಬರಹಗಳನ್ನು ಪ್ರಕೃತ ‘ಸೂಕ್ತಿ-ಸ್ತಬಕ’ ಸಂಪುಟದಲ್ಲಿ ಸಂಕಲನ ಮಾಡಲಾಗಿದೆ.

Main Menu