• ಉಪನಿಷತ್‌ ದರ್ಶನ

    ಪುಸ್ತಕದ ಹೆಸರು: ಉಪನಿಷತ್‌ ದರ್ಶನ
    ಲೇಖಕರು: ಶಿಕಾರಿಪುರ ಈಶ್ವರ ಭಟ್‌
    ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
    ಮುದ್ರಣ: ತೃತೀಯ ಮುದ್ರಣ

    ಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ-ಸರ್ವಸ್ವವಾದ ವೇದ-ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಹಾಗಾಗಿ ಅವುಗಳನ್ನು ಜನಸಾಮಾನ್ಯರು ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರ. ಇವುಗಳು ಪಂಡಿತರ ಪ್ರವಚನದ ಸರಕು, ಪಾಮರರ ಕೈಗೆಟುಕದ ವಸ್ತು ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಉಪನಿಷತ್ತುಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಉಪನಿಷತ್‌ ದರ್ಶನ ಎಂಬ ಹೆಸರಿನ ಪುಸ್ತಕ ಹೊರ ತಂದಿದ್ದಾರೆ ಲೇಖಕ, ಪತ್ರಕರ್ತ ಶಿಕಾರಿಪುರ ಈಶ್ವರ ಭಟ್.

Main Menu