ಪುಸ್ತಕದ ಹೆಸರು: ಎತ್ತರೆತ್ತರ ಭೈರಪ್ಪ; ಅಗೆದಷ್ಟೂ ಆಳ ಮೊಗೆದಷ್ಟು ಬೆರಗು
ಲೇಖಕರು: ದೀಕ್ಷಿತ್ ನಾಯರ್
ಪ್ರಕಾಶನ: ಸ್ನೇಹ ಬುಕ್ ಹೌಸ್
ಭೈರಪ್ಪನವರು ಬದುಕಿದಂತೆ ಬರೆದ ಮತ್ತು ಬರೆದಂತೆ ಬದುಕಿದ ಅಪರೂಪದ ಸಾಹಿತಿ. ಬದುಕಿನ ಕಡೆಯ ದಿನಗಳವರೆಗೂ ತಮ್ಮಿಚ್ಛೆಯಂತೆಯೇ ಬದುಕಿದವರು. ಬರವಣಿಗೆಯನ್ನು ಬಿಟ್ಟು ಮತ್ತೇನನ್ನೂ ಅವರು ನೆಚ್ಚಿಕೊಳ್ಳಲಿಲ್ಲ. ಬರಹದಿಂದಲೇ ಅವರು ಗ್ಲೋಬಲ್ ಸ್ಟಾರ್ ಆದವರು. ನಾಡಿನ ಖ್ಯಾತ ಸಾಹಿತಿ ಭೈರಪ್ಪನವರು ತಮ್ಮ ಬದುಕಿನ ಆರಂಭದ ದಿನಗಳಿಂದ ಕೊನೆಯವರೆಗೂ ಹೇಗೆಲ್ಲಾ ಬದುಕಿದ್ದರು, ಅವರು ಮಾಡಿದ ಮಹತ್ಕಾರ್ಯಗಳೇನು, ದೇಣಿಗೆ ಕೊಡುಗೆಗಳೇನು, ಅವರ ಬರಹಗಳು, ಹವ್ಯಾಸ ಏನೇನಿತ್ತು ಎಂಬಿತ್ಯಾದಿ ಭೈರಪ್ಪನವರ ಬದುಕಿನ ಚಿತ್ರಣವನ್ನು ತೆರೆದಿಡುವ ಪುಸ್ತಕವೇ ಈ ಎತ್ತರೆತ್ತರ ಭೈರಪ್ಪ.